ಪ -
	ಕನ್ನಡ ಅಕ್ಷರಮಾಲೆಯ ಪ ವರ್ಗದ ಮೊದಲನೆಯ ಲಿಪಿ ; ಅಲ್ಪಪ್ರಾಣ. ಉಭಯೋಷ್ಠ್ಯ ಅಘೋಪ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ. ಮೌರ್ಯರ ಕಾಲದ ಪಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲದಿರುವುದು ಗಮನಾರ್ಹ ಸಂಗತಿ ಮುಂದೆ ಕದಂಬರ ಕಾಲಕ್ಕೆ ಪಕಾರದ ಹೊಕ್ಕಳು ರೂಪುಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಕಲ್ಯಾಣ ಚಾಳುಕ್ಯರ ಕಾಲಕ್ಕೆ ತಲೆಕಟ್ಟು ನಿಕರವಾಗಿ ಕಾಣತೊಡಗುತ್ತದೆ. ವಿಜಯನಗರದ ಕಾಲಕ್ಕೆ ಈ ಲಿಪಿಗೆ ಇಂದಿನ ರೂಪ ಬರಹತ್ತಿ ಅದು ಮೈಸೂರು ಅರಸರ ಕಾಲಕ್ಕೆ ಖಚಿತವಾಗುತ್ತದೆ.

	ಪಕ್ಕೂ ಫಕ್ಕೂ ವ್ಯತ್ಯಾಸವೇನೆಂಬುದನ್ನು ತಿಳಿಯಲು ಫಕಾರದ ಚಿತ್ರ ನೋಡಬೇಕು. ಕಳಚೂರಿ ಕಾಲದಲ್ಲಿ ಹೊಕ್ಕಳು ಸೀಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಅದು ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ ಖಚಿತವಾಗುತ್ತದೆ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ